ಬಿಗ್ ಬಾಸ್ ಮನೆಯಲ್ಲಿ ಒಬ್ಬರು ಇನ್ನೊಬ್ಬರ ಬಣ್ಣ ಬಯಲು ಮಾಡುತ್ತಿದ್ದಾರೆ. ಬೆನ್ನ ಹಿಂದೆ ಆಡಿದ ಮಾತುಗಳೆಲ್ಲವೂ ಈಗ ಹೊರಗೆ ಬರುತ್ತಿವೆ. ‘ಶಿಶಿರ್ ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’ ಎಂದು ಚೈತ್ರಾ ಹೇಳಿರುವುದಾಗಿ ತ್ರಿವಿಕ್ರಮ್ ಆರೋಪಿಸಿದ್ದಾರೆ. ಈ ಮಾತು ಹೇಳಿಸಿಕೊಂಡು ಶಿಶಿರ್ ಅವರಿಗೆ ಶಾಕ್ ಆಗಿದೆ. ಈ ಮಾತಿಗೆ ಸ್ಪಷ್ಟನೆ ಬೇಕು ಎಂದು ಅವರು ಹಠ ಹಿಡಿದು ಕುಳಿತಿದ್ದಾರೆ.