ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾಗಿರುವ ರಿಚರ್ಡ್ ಎನ್ನುವವರು ಒಮ್ಮೆ ಮನೆಗೆ ಮನೆಗೆ ಬಂದು ಹೋಗಿ ಅಂತ ಹೇಳಿದ್ದು ತಮ್ಮ ಎಲ್ಲ ಪರಿಚಯಸ್ಥರಿಗೆ ನಿಮಗೆ ಮಾತ್ರ ವೋಟು ಹಾಕಬೇಕೆಂದು ಹೇಳುತ್ತ್ತೇನೆ ಎಂದಿದ್ದಾರೆ ಎಂದು ಮಾಜಿ ಸಚಿವ ಹೇಳಿದರು. ರಾಜ್ಯದ 27 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಮತ್ತು 28 ನೇ ಸ್ಥಾನವನ್ನು ತಾನು ಗೆದ್ದು ದೆಹಲಿಯಲ್ಲಿ ನರೇಂದ್ರ ಮೋದಿಯವರು ಪ್ರಧಾನಿ ಮಂತ್ರಿಯಾಗಬೇಕೆಂದು ಕೈ ಎತ್ತುವುದಾಗಿ ಈಶ್ವರಪ್ಪ ಹೇಳಿದರು.