9ನೇ ವಾರದಲ್ಲಿ ಬಿಗ್ ಬಾಸ್ ಮನೆ ರಣರಂಗ ಆಗಿದೆ. ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್ನಲ್ಲಿ ಎರಡು ತಂಡಗಳ ನಡುವೆ ತೀವ್ರ ಜಗಳ ಆಗುತ್ತಿದೆ. ಮೊದಲು ಗಂಧರ್ವರಾಗಿದ್ದ ಸ್ಪರ್ಧಿಗಳು ಈಗ ರಾಕ್ಷಸರಾಗಿದ್ದಾರೆ. ಕೆಲವರು ಬಿಗ್ ಬಾಸ್ನ ನಿಯಮ ಮೀರಿ ನಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಮ್ರತಾ ಗೌಡ ಅವರ ಆಟ ಚುರುಕಾಗಿದೆ. ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಲು ಅವರು ಹೋರಾಡುತ್ತಿದ್ದಾರೆ. ಈ ಜರ್ನಿಯಲ್ಲಿ ಅವರು ಸಂಗೀತಾ ಶೃಂಗೇರಿಯನ್ನು ಎದುರು ಹಾಕಿಕೊಂಡಿದ್ದಾರೆ. ಟಾಸ್ಕ್ ವಿಚಾರದಲ್ಲಿ ಕಿರಿಕ್ ಆದಾಗ ನಮ್ರತಾ ಜೋರಾಗಿ ಕಿರುಚಾಡಿದ್ದಾರೆ. ಬಹುತೇಕರಿಂದ ಟೀಕೆಗೆ ಒಳಗಾದ ಸಂಗೀತಾ ಶೃಂಗೇರಿ ಅವರು ಕಣ್ಣೀರು ಹಾಕಿದ್ದಾರೆ. ಈ ಸಂಚಿಕೆ ಕಲರ್ಸ್ ಕನ್ನಡದಲ್ಲಿ ಡಿ.7ರಂದು ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ಉಚಿತವಾಗಿ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಲೈವ್ ನೋಡಬಹುದು.