ವಿಜಯಪುರದ ಐತಿಹಾಸಿಕ ಸ್ಮಾರಕಗಳು ಹೇಗಿವೆ? ಹೆಚ್ಕೆ ಪಾಟೀಲ್ ಜೊತೆ ಕನ್ನಡದಲ್ಲೇ ಮಾತನಾಡಿದ ಅಮೇರಿಕದ ಪ್ರಜೆಗಳು
ವಿಜಯಪುರ, ನ.21: ಜಿಲ್ಲಾ ಪ್ರವಾಸದಲ್ಲಿರುವ ಅಮೇರಿಕಾದ ನ್ಯೂಯಾರ್ಕ್ ನಗರದ ಇಬ್ಬರು ಪ್ರಜೆಗಳು ಕನ್ನಡದಲ್ಲಿ ಮಾತನಾಡುವ ಮೂಲಕ ಸಚಿವ ಎಚ್ಕೆ ಪಾಟೀಲ್ ಅವರ ಮನಗೆದ್ದರು. ವಿದೇಶಿ ಪ್ರಜೆಗಳಾದ ರಿಚರ್ಡ್ ಮತ್ತು ನ್ಯಾನ್ಸಿ ಅವರ ಕನ್ನಡ ಪ್ರೀತಿ ಕಂಡು ಸಚಿವರು ನಾಳೆ ಬೆಳಿಗ್ಗೆ ಉಪಹಾರಕ್ಕೆ ಆಹ್ವಾನಿಸಿದರು.