ಡಾ ಕೆ ಸುಧಾಕರ್, ಬಿಜೆಪಿ ನಾಯಕ

ತಾನು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಬಯಕೆ ಎಲ್ಲೂ ವ್ಯಕ್ರಪಡಿಸಿಲ್ಲ; ಆದರೆ ತಾವೇ ಸ್ಪರ್ಧಿಸಬೇಕೆಂದು ಒಂದೇ ಸಮನೆ ಆಗ್ರಹಿಸುತ್ತಿರುವ ಅಭಿಮಾನಿ ಮತ್ತು ಬೆಂಬಲಿಗರನ್ನು ಸಮಾಧಾನಪಡಿಸಲು ಸ್ಪರ್ಧಿಸುತ್ತೇನೆ ಅಂತ ಹೇಳಬೇಕಾಗುತ್ತದೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಹೊಂದಾಣಿಕೆಯಾಗಿದೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಣಯಕ್ಕೆ ತಾನು ಬದ್ಧನಾಗಿರುತ್ತೇನೆ, ಅವಕಾಶ ಕೊಟ್ಟರೆ ಸ್ಪರ್ಧಿಸುತ್ತೇನೆ ಎಂದು ಹೇಳಿದರು.