ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ

ಪೊಲೀಸರು ಶಾಲೆಗಳನ್ನು ಸ್ಯಾನಿಟೈಸ್ ಮಾಡಿ ಯಾವುದೇ ಅಪಾಯಕಾರಿ ವಸ್ತು ಇಲ್ಲದಿರುವುದನ್ನು ಖಚಿತಪಡಿಸಿ ಇವತ್ತು ಶಾಲೆಗಳನ್ನು ನಡೆಸಬಹುದೆಂದು ಹೇಳಿರುವುದು ಪೋಷಕರಲ್ಲಿ ಆತಂಕ ದೂರ ಮಾಡಿರುವುದು ಸತ್ಯ. ಆದರೆ, ಅವರಲ್ಲಿ ಭಾರೀ ಪ್ರಮಾಣದ ಆತಂಕ ಉಂಟು ಮಾಡಿದ ಮೇಲ್ ಗಳನ್ನು ಕಳಿಸಿದ ದುಷ್ಟರು ಯಾರೆನ್ನುವುದು ಪತ್ತೆಯಾಗಿಲ್ಲ. ಪೊಲೀಸರು ಆದಷ್ಟು ಬೇಗ ಅದನ್ನು ಪತ್ತೆಹಚ್ಚಬೇಕು.