ಮಂಡ್ಯ ಜಿಲ್ಲೆಯ ಅವ್ವೇರಹಳ್ಳಿ ಗ್ರಾಮದ ರೈತ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಹೀಗಾಗಿ, 15ಕ್ಕೂ ಹೆಚ್ಚು ಬ್ರಹ್ಮಚಾರಿಗಳು ಮಲೆ ಮಹದೇಶ್ವರನ ಕೃಪೆಗಾಗಿ ಪಾದಯಾತ್ರೆ ಹೊರಟಿದ್ದಾರೆ. ಅವ್ವೇರಹಳ್ಳಿ ಗ್ರಾಮವೊಂದರಲ್ಲೇ 50 ಕ್ಕೂ ಹೆಚ್ಚು ಮಂದಿ ಅವಿವಾಹಿತರಿದ್ದಾರೆ. ಯಾರಿಗೂ ಹೆಣ್ಣು ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದು ರೈತರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.