ಕಿಡ್ನಾಪ್​ಗೂ ನಂಗೂ ಸಂಬಂಧ ಇಲ್ಲ: ಎಚ್.ಡಿ. ರೇವಣ್ಣ

ಲೈಂಗಿಕ ಕಿರುಕುಳ ಮತ್ತು ಅಪಹರಣ ಪ್ರಕರಣಗಳಲ್ಲಿ ಸಿಲುಕಿರುವ ಜೆಡಿಎಸ್ ಶಾಸಕ ಹಾಗು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ಎಸ್​ಐಟಿ ಅಧಿಕಾರಿಗಳ ತಂಡ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇದೂವರೆಗೆ ನಡೆದ ವಿಚಾರಣೆಯಲ್ಲಿ ರೇವಣ್ಣ ಹೆಚ್ಚು ಬಾಯಿ ತೆರೆದಿಲ್ಲ. ಈ ಕಿಡ್ನಾಪ್​ಗೂ ತನಗೂ ಸಂಬಂಧ ಇಲ್ಲ, ತನಗೆ ಏನೂ ಗೊತ್ತಿಲ್ಲ ಎಂಬಂತಹ ಮಾತುಗಳನ್ನೇ ಹೇಳುತ್ತಾ ಬಂದಿದ್ದಾರೆ ಎನ್ನಲಾಗಿದೆ. ಇವತ್ತೂ ಕೂಡ ರೇವಣ್ಣ ಅವರನ್ನು ಎಸ್​ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.