ಕಾಲಿನ ಸ್ವಾಧೀನವಿಲ್ಲದ ಯುವತಿ ರಾಯರ ಮಠಕ್ಕೆ ಬರುತ್ತಿದ್ದಂತೆಯೇ ಓಡಾಟ

ಕಾಲಿನ ಸ್ವಾಧೀನವಿಲ್ಲದ ಯುವತಿ ರಾಯರ ಮಠಕ್ಕೆ ಬರುತ್ತಿದ್ದಂತೆಯೇ ಎದ್ದು ನಡೆದಾಡಿರುವಂತಹ ಅಚ್ಚರಿಯ ಘಟನೆಯೊಂದು ಚಿತ್ರದುರ್ಗದ ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದಿದೆ. ನಿನ್ನೆ ಸಂಜೆ ರಾಯರ ಮಠಕ್ಕೆ ವೀಲ್ ಚೇರ್​ನಲ್ಲಿ ಬಂದಿದ್ದ ತೇಜಸ್ವಿನಿ, ರಾಯರ ಮಠವನ್ನು ಮೂರು ಸುತ್ತು ಹಾಕಿದ್ದಾಳೆ. ರಾಯರ ಪವಾಡದಿಂದ ತೇಜಸ್ವಿನಿ ನಡೆದಾಡಿದ್ದಾಳೆಂದು ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.