ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಗುಜರಾತ್‌ನ ಜಾಮ್‌ನಗರದಲ್ಲಿ ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಒಬ್ಬ ಪೈಲಟ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಪೈಲಟ್ ನನ್ನು ರಕ್ಷಿಸಲಾಗಿದೆ. ಜಾಮ್‌ನಗರ ಎಸ್‌ಪಿ ಈ ಘಟನೆಯನ್ನು ದೃಢಪಡಿಸಿದ್ದಾರೆ. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು ಎಂದು ಜಾಮ್‌ನಗರ ಎಸ್‌ಪಿ ಪ್ರೇಮ್‌ಸುಖ್ ದೇಲು ತಿಳಿಸಿದ್ದಾರೆ.