ಉಪೇಂದ್ರ, ಸುದೀಪ್​, ಶಿವಣ್ಣ ಅಲ್ಲ, ‘ಕಬ್ಜ’ದಲ್ಲಿರುವ ಅಸಲಿ ಮೂರು ಸ್ಟಾರ್​ಗಳು ಇವರೇ; ಉಪ್ಪಿ ಬಿಚ್ಚಿಟ್ರು ಮಾಹಿತಿ

‘ಕಬ್ಜ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಮುಂದಿನ ಶುಕ್ರವಾರ (ಮಾರ್ಚ್​ 17) ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರಕ್ಕೆ ಈಗಾಗಲೇ ಅಬ್ಬರದ ಪ್ರಚಾರ ನೀಡಲಾಗುತ್ತಿದೆ. ಆರ್​. ಚಂದ್ರು ಅವರು ಈ ಸಿನಿಮಾನ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಈ ಚಿತ್ರದಲ್ಲಿ ಉಪೇಂದ್ರ, ಸುದೀಪ್ ಹಾಗೂ ಶಿವರಾಜ್​ಕುಮಾರ್ ಇದ್ದಾರೆ. ಆದರೆ, ಈ ಮೂವರು ಸ್ಟಾರ್ಸ್​ ಅಲ್ಲವಂತೆ. ‘ಕಬ್ಜ ತಾಂತ್ರಿಕವಾಗಿ ಶ್ರೀಮಂತವಾಗಿರುವ ಸಿನಿಮಾ. ಸಿನಿಮಾದಲ್ಲಿ ಮೂರು ಸ್ಟಾರ್ಸ್ ಇದ್ದಾರೆ. ಕ್ಯಾಮೆರಾಮೆನ್ ಎ.ಜೆ. ಶೆಟ್ಟಿ, ಆರ್ಟ್ ಡೈರೆಕ್ಟರ್ ಶಿವಕುಮಾರ್ ಹಾಗೂ ರವಿ ಬಸ್ರೂರ್ ಇವರು ಚಿತ್ರದ ಸ್ಟಾರ್ಸ್​’ ಎಂದಿದ್ದಾರೆ ಉಪೇಂದ್ರ.