ಮರಿಗಳೊಂದಿಗೆ ನೀರು ಕುಡಿಯುತ್ತಿರುವ ತಾಯಿಹುಲಿ

ಭಾರತದಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿರುವುದು ಸಂತೋಷಕರ ಸಂಗತಿ. ಇದರಲ್ಲಿ ನಾಗರಹೊಳೆ ರಕ್ಷಿತಾರಣ್ಯದ ಹುಲಿಗಳ ಕೊಡುಗೆಯೂ ಇದೆ. ಹುಲಿ ಹಿಂಸ್ರಪಶುವಾದರೂ ಬೇರೆಲ್ಲ ಪ್ರಾಣಿಗಳ ಹಾಗೆ ತನ್ನ ಮರಿಗಳ ವಿಷಯದಲ್ಲಿ ಅತೀವ ಕಾಳಜಿ ಮತ್ತು ಮಮತೆಯನ್ನು ಹೊಂದಿರುತ್ತದೆ. ಈ ವಿಡಿಯೋದಲ್ಲಿ ತಾಯಿ ಹುಲಿ ನೀರು ಕುಡಿಯುತ್ತಿರುವುದು ನಿಜವಾದರೂ ಒಂದು ದೃಷ್ಟಿ ತನ್ನ ಮಕ್ಕಳ ಮೇಲೆ ಇಟ್ಟಿದೆ.