ಪ್ರದೂಷ ಕಾಲದ ಮಹತ್ವಹಾಗೂ ಇದರ ಹಿಂದಿನ ರಹಸ್ಯ

ಶುಕ್ಲ ಮತ್ತು ಕೃಷ್ಣ ತ್ರಯೋದಶಿಗಳಂದು ಬರುವ ಪವಿತ್ರ ಪ್ರದೋಷ ಕಾಲವು ತಿಂಗಳಿಗೆ ಎರಡು ಬಾರಿ ಬರುತ್ತದೆ. ಈ ಸಮಯದಲ್ಲಿ ಶಿವನ ಪೂಜೆ, ಜಪ ಮಾಡುವುದರಿಂದ ವಿಶೇಷ ಫಲ ಸಿಗುತ್ತದೆ. ಸೂರ್ಯಾಸ್ತದಿಂದ ಎರಡು ಗಂಟೆ 24 ನಿಮಿಷಗಳ ಕಾಲ ಇರುವ ಈ ಸಮಯದಲ್ಲಿ ಶಿವನ ಕೃಪೆಗೆ ಪಾತ್ರರಾಗಬಹುದು. ತ್ರಯೋದಶಿಯ ಪ್ರದೋಷವನ್ನು ಮಹಾಪ್ರದೋಷ ಎನ್ನುತ್ತಾರೆ.