ಮನೆಯ ಛಾವಣಿಯ ಮೇಲೆ ಚಿರತೆ, ಕರಡಿ ಓಡಾಟ, ಇಲ್ಲಿದೆ ಭಯಾನಕ ವಿಡಿಯೋ

ಊಟಿಯ ಯಲ್ಲನಳ್ಳಿ ಕೈಕಟ್ಟಿ ಗ್ರಾಮದ ಮನೆಯೊಂದರ ಛಾವಣಿಯ ಮೇಲೆ ಚಿರತೆ ಓಡಾಟ ನಡೆಸಿದೆ. ಚಿರತೆ ಹೋದ ಸ್ವಲ್ಪ ಹೊತ್ತಿನ ನಂತರ ಅದೇ ಮನೆಯ ಛಾವಣಿಯ ಮೇಲೆ ಕರಡಿ ತಿರುಗಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇನ್ನು ಈ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ವನ್ಯಜೀವಿಗಳು ಹಾಗೂ ಇಂತಹ ಅಪಾಯಕಾರಿ ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.