‘ಬಿಗ್ ಬಾಸ್’ ಎಂದರೆ ವಿವಾದಗಳು ಕಾಮನ್. ಪ್ರತಿ ಬಾರಿಯೂ ಸ್ಪರ್ಧಿಗಳ ಆಯ್ಕೆ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕಾಂಟ್ರವರ್ಸಿ ಮಾಡಿಕೊಂಡ ವ್ಯಕ್ತಿಗಳಿಗೆ ಈ ಶೋನಲ್ಲಿ ಮಣೆ ಹಾಕಲಾಗುತ್ತದೆ ಎಂಬ ಮಾತಿದೆ. ಇಂದು (ಅ.3) ಸುದ್ದಿಗೋಷ್ಠಿಯಲ್ಲಿ ಆ ಬಗ್ಗೆ ಪ್ರಸ್ತಾಪ ಆಯಿತು. ಕಳೆದ ಸೀಸನ್ನಲ್ಲಿ ಸ್ಪರ್ಧಿಗಳ ಆಯ್ಕೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಿದೆ ಎಂಬ ಪ್ರಶ್ನೆ ಎದುರಾಯಿತು. ಆಗ ಸುದೀಪ್ ಅವರು ಗರಂ ಆದರು. ‘ಟ್ರೋಲ್ ಆದ ಸ್ಪರ್ಧಿಗಳು ಯಾರು ಎಂಬ ಹೆಸರನ್ನು ಹೇಳಿ’ ಎಂದು ಮಾಧ್ಯಮದವರಿಗೆ ಸುದೀಪ್ ಒತ್ತಾಯಿಸಿದರು. ‘ನೀವು ಮಾತನಾಡುತ್ತಿರುವುದು ಇನ್ನೊಬ್ಬರ ಬಗ್ಗೆ. ನೀವು ಹೆಸರು ಹೇಳಿದರೆ ಮಾತ್ರ ಉತ್ತರ ಕೊಡುತ್ತೇನೆ. ಅವರು ಯಾರದ್ದೋ ತಂದೆ-ತಾಯಿಯ ಮಕ್ಕಳು. ಯಾರದ್ದೋ ಗಂಡ, ಯಾರದ್ದೋ ಹೆಂಡತಿ. ಅವರ ಮನೆ ಒಳಗೆ ಏನು ನಡೆದಿತ್ತೋ ನಮಗೆ ಗೊತ್ತಾ? ಕ್ಲೀನ್ ಆಗೋಕೆ ಮತ್ತು ಅವರು ತಮ್ಮನ್ನು ಸಾಬೀತು ಮಾಡಿಕೊಳ್ಳೋಕೆ ಇದು ಇದು ಒಳ್ಳೆಯ ವೇದಿಕೆ. ಆ ಜಾಗದಲ್ಲಿ ನಾಳೆ ನೀವು ಇರಬಹುದು. ಆಗ ನಿಮ್ಮ ಪರವಾಗಿ ನಾವಿರುತ್ತೇವೆ. ಯಾರೋ ಟ್ರೋಲ್ ಮಾಡಿರಬಹುದು. ಆದರೆ ನಿಮಗೆ ಜವಾಬ್ದಾರಿ ಇದೆ’ ಎಂದು ಖಡಕ್ ಆಗಿ ಸುದೀಪ್ ಉತ್ತರ ನೀಡಿದರು.