ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಧಾರ್ಮಿಕ ಕ್ಷೇತ್ರಗಳಲ್ಲಿನ ಪಂಕ್ತಿ ಭೋಜನದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಪಂಕ್ತಿ ಎಂದರೆ ಸಂಸ್ಕೃತದಲ್ಲಿ ಸಾಲು ಎಂದರ್ಥ. ಪಂಕ್ತಿ ಭೋಜನದಲ್ಲಿ, ಜಾತಿ, ಸ್ಥಾನಮಾನ ಅಥವಾ ಹಿನ್ನೆಲೆಯನ್ನು ಲೆಕ್ಕಿಸದೆ ಜನರು ಒಂದೇ ಸಾಲುಗಳಲ್ಲಿ ಕುಳಿತು ಒಟ್ಟಿಗೆ ಊಟ ಮಾಡುತ್ತಾರೆ.