ರೀಲ್ಸ್ ಮಾಡ್ತಾ ಲವ್ವಿಡವ್ವಿ, ಇಬ್ಬರು ಮಕ್ಕಳ ತಾಯಿ ಎಸ್ಕೇಪ್

ಕುಂತ್ರೆ ಟಿಕ್ ಟಾಕ್, ನಿಂತ್ರೆ ರೀಲ್ಸ್. ಮೊಬೈಲ್ ಕೈಯಲ್ಲಿತ್ತು ಅಂದ್ರೆ ಪೋಸ್ ಕೊಟ್ಟು ಅಪ್ ಲೋಡ್ ಮಾಡೋದು. ಆ ಸುಂದರಿಗೆ ಇದೇ ಖಯಾಲಿ ಆಗಿತ್ತು. ಮದುವೆ ಆಗಿ ಮಕ್ಕಳಾದ್ರೂ ತನ್ನ ಚಟ ಬಿಟ್ಟಿರಲಿಲ್ಲ. ಅವಳ ಈ ಹುಚ್ಚಾಟಕ್ಕೆ ಪಾಪ ಗಂಡ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾನೆ. ಮೋಹಕ ನಗೆಯ ಬೀರುತ್ತಾ ರೀಲ್ಸ್ ಮಾಡ್ತಾ ಇರೋ ಇವಳ ಹೆಸರು ಅರ್ಪಿತಾ, ಈಕೆ‌ ಇನ್ಸ್‌ಟಾಗ್ರಾಮ್‌ನಲ್ಲಿ ತನ್ನದೇ ಫಾಲೋವರ್ಸ್ ಹೊಂದಿದ್ಲು, ಈಕೆ ಮೈ ಬಳುಕಿಸುತ್ತಾ ಒಂದು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ರೆ ಸಾಕು ನೂರಾರು ಲೈಕ್ಸ್ ಕಮೆಂಟ್ಸ್, ಸಾವಿರಾರು ವೀವ್ಸ್, ರಿಯಲ್ ಲೈಫ್‌ನಲ್ಲಿ ಒಳ್ಳೆಯ ಗಂಡ ಹಾಗೂ ಇಬ್ಬರು ಮುದ್ದಾದ ಮಕ್ಕಳಿದ್ರು ಈಕೆಗೆ ರೀಲ್ಸ್ ಲೈಫ್ ಕೊಟ್ಟು ಕ್ರೇಜ್ ರಿಯಲ್ ಲೈಫ್ ಕೊಟ್ಟಿಲ್ಲ ಅನ್ಸುತ್ತೆ, ಯಾಕಂದ್ರೆ ಈಕೆಗೆ ಕಟ್ಟಿಕೊಂಡ ಗಂಡನಿಗಿಂತ ರೀಲ್ಸ್‌ನಲ್ಲಿ ಪರಿಚಯವಾದ ದಿವಾಕರ್ ಎನ್ನುವವನೇ ಮುಖ್ಯವಾಗಿ, ಗಂಡನನ್ನ ಬಿಟ್ಟು ಆತನೊಂದಿಗೆ ಪರಾರಿಯಾಗಿದ್ದಾಳೆ.