ಬ್ರ್ಯಾಂಡ್ ಬೆಂಗಳೂರು -ಡಿ.ಕೆ.ಶಿವಕುಮಾರ್​ ಮಾಸ್ಟರ್ ಪ್ಲಾನ್ ವಿವರ ಹೀಗಿದೆ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್​​ ಅವರು ಕುಮಾರಕೃಪಾ ಗೆಸ್ಟ್​ಹೌಸ್​ನಲ್ಲಿ ಬ್ರ್ಯಾಂಡ್ ಬೆಂಗಳೂರು ನಿರ್ಮಾಣದ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಬ್ರ್ಯಾಂಡ್ ಬೆಂಗಳೂರು ನಿರ್ಮಾಣದ ಬಗ್ಗೆ ದೇಶ, ವಿದೇಶದಿಂದಲೂ ಸಲಹೆ ಬಂದಿದೆ. ಶಾಲಾ ಮಕ್ಕಳಿಂದ ಹಿಡಿದು ವಿದೇಶದಲ್ಲಿರುವವರೂ ಸಲಹೆ ನೀಡಿದ್ದಾರೆ. ಜನರ ಸಲಹೆ ಸೂಚನೆ ಅನ್ವಯ ಪ್ಲ್ಯಾನ್ ರೂಪಿಸಲು ಸಂಸ್ಥೆಗೆ ಹಸ್ತಾಂತರ ಮಾಡುತ್ತೇವೆ. ಬೆಂಗಳೂರಿನಲ್ಲಿ ಸಂಚಾರ ನಿಯಂತ್ರಣಕ್ಕೆ ಫ್ಲೈಓವರ್, ಸುರಂಗ ಮಾರ್ಗ ಅಗತ್ಯವಿದೆ. ಕೇಂದ್ರದ ಹೆದ್ದಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಮಾಸ್ಟರ್​ಪ್ಲಾನ್ ರೂಪಿಸಿಕೊಂಡು ಬರುವಂತೆ ಕೇಂದ್ರ ಸಚಿವರು ಹೇಳಿದ್ದಾರೆ. ಸಂಚಾರ ನಿರ್ವಹಣೆ ಸಂಬಂಧ ಹಲವು ಸಂಸ್ಥೆಗಳಿಂದಲೂ ಸಲಹೆ ಸೂಚನೆ ಬಂದಿದೆ. ಆಗಸ್ಟ್​ 17ರವರೆಗೂ ಸಲಹೆ ಸೂಚನೆ ಸಲ್ಲಿಸಲು ಅವಧಿ ವಿಸ್ತರಣೆ ಮಾಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ .