ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನತ್ತ ಇಡೀ ವಿಶ್ವದ ಚಿತ್ತ ನೆಟ್ಟಿದೆ. ಕ್ರಿಕೆಟ್ ವಿಶ್ವಯುದ್ಧದ ಫೈನಲ್ ಪಂದ್ಯದ ಕಾವು ಹೆಚ್ಚಾಗಿದೆ. ಮಧ್ಯಾಹ್ನ 2 ಗಂಟೆಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ವಿಶ್ವ ಕಪ್ಗಾಗಿ ಕದನ ನಡೆಯಲಿದೆ. ಹೀಗಾಗಿ ಇಂದು ದೇಶಾದ್ಯಂತ ಗೆದ್ದು ಬಾ ಇಂಡಿಯಾ ಅಂತಾ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಕ್ರೀಡಾಭಿಮಾನಿಗಳು ವಿಶೇಷ ರೀತಿಯಲ್ಲಿ ಶುಭ ಕೋರುತ್ತಿದ್ದಾರೆ. ಅದರಂತೆ ಮೈಸೂರಿನಲ್ಲಿ ಅಭಿಮಾನಿಯೊಬ್ಬರು ಪಾರಿವಾಳಗಳಿಗೆ ಹಾಕುವ ಧಾನ್ಯಗಳಲ್ಲಿ ಗೆದ್ದು ಬಾ ಭಾರತ ಎಂದು ಬರೆದು ಶುಭಹಾರೈಸಿದ್ದಾರೆ.