ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರ ಉತ್ತಮ ಹಾಗೂ ಕಳಪೆ ನೀಡಲಾಗುತ್ತದೆ. ಈ ವಾರ ದೊಡ್ಮನೆಯಲ್ಲಿ ಅನೇಕರು ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡಿದ್ದಾರೆ. ಈ ಪೈಕಿ ಉತ್ತಮ ಯಾರಾಗುತ್ತಾರೆ, ಕಳಪೆ ಯಾರಾಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದೆ. ಈ ಪ್ರೋಮೋದಲ್ಲಿ ಅನೇಕರು ನೀತು ವನಜಾಕ್ಷಿಗೆ ಕಳಪೆ ಪಟ್ಟ ನೀಡಿದ್ದಾರೆ. ಇನ್ನೂ ಕೆಲವರು ಈಶಾನಿ ಹೆಸರನ್ನು ಎತ್ತಿದ್ದಾರೆ. ವಜ್ರಕಾಯ ತಂಡದಲ್ಲಿದ್ದವರಿಗೇ ಅವರ ಆಟ ಇಷ್ಟ ಆಗಿಲ್ಲ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ.