‘ನಾನು ಚಾನ್ಸ್ಗಾಗಿ ಅಲೆದಾಡಿದ ಜಾಗದಲ್ಲಿ ನನ್ನದೇ ಕಟೌಟ್’; ಬಿರಾದಾರ್ ಖುಷಿ

ವೈಜನಾಥ್ ಬಿರಾದಾರ್ ಅವರದ್ದು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಾಧನೆ. ಅವರ ನಟನೆಯ 500ನೇ ಸಿನಿಮಾ ‘90 ಬಿಡಿ ಮನೀಗ್ ನಡಿ’ ಚಿತ್ರ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಹೀರೋ ಪಾತ್ರ ಮಾಡಿದ್ದಾರೆ. ಅವರು ಚಿತ್ರರಂಗದಲ್ಲಿ ಹಲವು ದಶಕಗಳಿಂದ ಇದ್ದಾರೆ. ಈಗ ಮೊದಲ ಬಾರಿಗೆ ಗಾಂಧಿ ನಗರದಲ್ಲಿ ಅವರ ಕಟೌಟ್ ತಲೆ ಎತ್ತಿದೆ. ಈ ಬಗ್ಗೆ ಅವರಿಗೆ ಖುಷಿ ಇದೆ. ಈ ಕುರಿತು ವೈಜನಾಥ್ ಅವರು ಮಾತನಾಡಿದ್ದಾರೆ.