ಮೈಸೂರಿನಲ್ಲಿ ಚಾಂಮುಂಡಿಯ ದರ್ಶನ ಪಡೆದ ಡಾಲಿ ಧನಂಜಯ್

ನಟ ಧನಂಜಯ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ಇಂದು (ಜೂನ್ 30) ಧನಂಜಯ್ ಅವರು ಮೈಸೂರಿನ ಚಾಂಮುಂಡಿ ಬೆಟ್ಟಕ್ಕೆ ತೆರಳಿ ಚಾಂಮುಂಡೇಶ್ವರಿ ದೇವಿಯ ದರ್ಶನ ಮಾಡಿದ್ದಾರೆ. ಧನಂಜಯ್ ಅವರು ‘ಡಾಲಿ ಪಿಕ್ಚರ್ಸ್​’ ಮೂಲಕ ‘ಡೇರ್​ ಡೆವಿಲ್​’ ಸಿನಿಮಾನ ಪ್ರೆಸೆಂಟ್ ಮಾಡಿದ್ದರು. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಯಿತು.