‘ನಾನೇ ಬಿಗ್​ ಬಾಸ್​’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಲಾಯರ್​ ಜಗದೀಶ್​

ಜಗಳದಿಂದಲೇ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋ ಸದ್ದು ಮಾಡುತ್ತಿದೆ. ಅನೇಕರ ಜೊತೆ ಲಾಯರ್​ ಜಗದೀಶ್​ ಕಿರಿಕ್​ ಶುರು ಮಾಡಿದ್ದಾರೆ. ‘ಎಲ್ಲರೂ ಮುಖವಾಡ ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ. ನನ್ನ ಘನತೆ, ಗೌರವ ಹೊರಗಡೆ ಚೆನ್ನಾಗಿಯೇ ಇದೆ. ನಾನೇ ಬಿಗ್​ ಬಾಸ್​. ನಾನು ಹೊರಗೆ ಇರುವುದೇ ಉತ್ತಮ’ ಎಂದು ಜಗದೀಶ್​ ಹೇಳಿದ್ದಾರೆ. ಈ ಮಾತಿಗೆ ಸುದೀಪ್​ ಏನು ಹೇಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಸೃಷ್ಟಿಯಾಗಿದೆ.