ಅಭಿಮಾನಿ, ಚಿತ್ರರಂಗದವರಿಂದ ಮತ್ತು ಮನೆಯಲ್ಲೂ ಅಪ್ಪು ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಪುನೀತ್ ರಾಜ್ಕುಮಾರ್ ಸಮಾಧಿಯಿರುವ ಕಂಠೀರವ ಸ್ಟುಡಿಯೋಗೆ ಇವತ್ತು ನಸುಕಿನ ಜಾವದಿಂದಲೇ ಜನ ಬರೋದು ಆರಂಭವಾಗಿತ್ತು. ಅಪ್ಪು ಕುಟುಂಬದ ಸದಸ್ಯರು ಭಾವುಕರಾಗಿದ್ದರು. ರಾಘವೇಂದ್ರ ರಾಜ್ಕುಮಾರ್ ಈಗಲೂ ತಮ್ಮನನ್ನು ನೆನಸಿಕೊಂಡು ಮಗುವಿನಂತೆ ದುಃಖಿಸುತ್ತಾರೆ.