ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತಕ್ಕೆ ಯುವ ಸಮುದಾಯ ಮತ್ತು ಮಕ್ಕಳು ಬಹುದೊಡ್ಡ ಆಸ್ತಿಯೆನಿಸಿರುವುದರಿಂದ ಅವರನ್ನು ಬಲಿಷ್ಠ ಶಕ್ತಿಯಾಗಿ ಬೆಳೆಸಬೇಕಿದೆ. ಈ ದಿಶೆಯಲ್ಲಿ ಅವರಿಗೆ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವ ಗುರುತರ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದು ಶಿವಕುಮಾರ್ ಹೇಳಿದರು.