ರಾಜಸ್ಥಾನ ರಾಜ್ಯಪಾಲ ಹರಿಭಾವು ಬಾಗ್ಡೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಸ್ಫೋಟ; ಕೂದಲೆಳೆ ಅಂತರದಲ್ಲಿ ಬಚಾವ್

ರಾಜಸ್ಥಾನದ ರಾಜ್ಯಪಾಲ ಹರಿಭಾವು ಬಾಗ್ಡೆ ಅವರ ಹೆಲಿಕಾಪ್ಟರ್ ಪಾಲಿಯಿಂದ ಜೈಪುರಕ್ಕೆ ಹೋಗುತ್ತಿದ್ದಾಗ ಸ್ಫೋಟವಾಗಿದೆ. ಟೇಕಾಫ್ ಆಗುವಾಗ ಹೆಲಿಕಾಪ್ಟರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಹೆಲಿಕಾಪ್ಟರ್ ಕೆಲವು ಅಡಿ ಎತ್ತರಕ್ಕೆ ಏರಿದ ನಂತರ ಟೇಕಾಫ್ ಆಗಲು ಪ್ರಯತ್ನಿಸಿದಾಗ, ಇದ್ದಕ್ಕಿದ್ದಂತೆ ಅದರಿಂದ ದೊಡ್ಡ ಸ್ಫೋಟ ಕೇಳಿಸಿತು. ಈ ಘಟನೆ ಇದ್ದಕ್ಕಿದ್ದಂತೆ ಸಂಭವಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿತು.