ಮದುವೆ ಸಂಭ್ರಮದ ನಡುವೆಯೂ ಊರಿನ ಶಾಲೆಗೆ ಭೇಟಿ ನೀಡಿದ ಡಾಲಿ ಧನಂಜಯ
ಡಾಲಿ ಧನಂಜಯ ಅವರ ಹುಟ್ಟೂರಿನಲ್ಲಿ ವಿವಾಹಪೂರ್ವ ಶಾಸ್ತ್ರಗಳು ಆರಂಭ ಆಗಿವೆ. ಈ ಸಂಭ್ರಮದ ನಡುವೆಯೂ ಬಿಡುವು ಮಾಡಿಕೊಂಡು ಶಾಲೆಗೆ ಭೇಟಿ ನೀಡಿದ್ದಾರೆ. ಸ್ವಂತ ಹಣದಲ್ಲಿ ಈ ಸರ್ಕಾರಿ ಶಾಲೆಗೆ ಡಾಲಿ ಅವರು ಮೂಲಭೂತ ಸೌಕರ್ಯ ಕಲ್ಪಿಸಿದ್ದಾರೆ. ಆ ಮೂಲಕ ಅವರು ಮಾದರಿ ಕೆಲಸ ಮಾಡಿದ್ದಾರೆ.