ಹಿಡಿಯುವಾಗ ಕೊರಳಿಗೆ ಸುತ್ತಿಕೊಂಡ ನಾಗರ ಹಾವು!

ದಾವಣಗೆರೆಯ ಸ್ನೇಕ್ ಬಸಣ್ಣ ಹಾವು ಹಿಡಿಯವುದರಲ್ಲಿ ಎಕ್ಸ್​​ಪರ್ಟ್. ಆಗಾಗ ಅಲ್ಲಲ್ಲಿ ಹಾವು ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಡುತ್ತಾರೆ. ಆದರೆ, ಚಾಲಾಕಿ ಹಾವೊಂದು ಅವರನ್ನೇ ಯಾಮಾರಿಸಿದೆ. ಹಿಡಿಯುವ ಸಂದರ್ಭದಲ್ಲಿ ಅವರ ಕೊರಳನ್ನೇ ಸುತ್ತಿಕೊಂಡು ಭೀತಿ ಹುಟ್ಟಿಸಿದೆ. ಕೊನೆಗೆ ಅವರು ಅದ್ಹೇಗೋ ಹಾವಿನ ಕುಣಿಕೆಯಿಂದ ಬಚಾವಾಗಿ ಅದನ್ನು ಸೆರೆಹಿಡಿದಿದ್ದಾರೆ. ವಿಡಿಯೋ ಇಲ್ಲಿದೆ.