ಹಂಪಿಯಲ್ಲಿ ಚಾರ್ತುಮಾಸ ತಪಸ್ಸು ನಡೆಸಿದ್ದ ಶ್ರೀರಾಮ.. ಸ್ಥಳ ಪುರಾಣ ಕೇಳಿ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಶ್ರೀರಾಮನನ್ನು ನೆನೆಪಿಸುವಂತಾ ಹಲವು ಪುಣ್ಯಕ್ಷೇತ್ರಗಳು ಕರ್ನಾಟಕದಲ್ಲಿವೆ. ಅದರಲ್ಲಿ ವಿಜಯನಗರ ಜಿಲ್ಲೆ ಹಂಪಿ ಸಹ ಒಂದು. ಹಂಪಿಯನ್ನ ರಾಮಾಯಣದಲ್ಲಿ ಕಿಷ್ಕಿಂದಾ ನಗರ ಅಂತ ಕರೆಯಲಾಗುತ್ತಿತ್ತು. ಈ ಕಿಷ್ಕಿಂದ ನಗರ ಹಂಪಿಗೂ ಅಯೋಧ್ಯೆ ರಾಮನಿಗೂ ಸಾಕಷ್ಟು ಸಂಬಂಧ ಇದೆ. ಹಂಪಿಯ ಕಿಷ್ಕಿಂದ ನಗರದಲ್ಲಿ ಶ್ರೀರಾಮ ಬಂದು ನೆಲೆಸಿದ್ದ, ಹಂಪಿಯ ಹಲವು ಭಾಗಗಳಲ್ಲಿ ಸಂಚರಿಸಿದ್ದ ಅನ್ನೋ ಪೌರಾಣಿಕ ಹಿನ್ನೆಲೆ ಇದೆ... ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ