ಬೆಂಗಳೂರು, ಏಪ್ರಿಲ್ 3: ಇಂದು ಮುಂಜಾನೆಯಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಬಸವನಗುಡಿ, ಗಿರಿನಗರ, ಜಯನಗರ, ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಬನಶಂಕರಿ, ನಾಯಂಡನಹಳ್ಳಿ, ಚಾಮರಾಜನಗರ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ವೈಟ್ಫೀಲ್ಡ್ ಮುಂತಾದ ಭಾಗಗಳಲ್ಲಿ ಮಳೆ ಸುರಿದಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ಅರ್ಧ ಗಂಟೆ ಸುರಿದ ಮಳೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಎಚ್ಎಸ್ಆರ್ ಲೇಔಟ್ನಲ್ಲಿ ಸುರಿದ ಮಳೆಯ ವಿಡಿಯೋವನ್ನು ಎಕ್ಸ್ ಖಾತೆಯನ್ನು ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.