‘ದರ್ಶನ್​ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ

ಕೊಲೆ ಕೇಸ್​ನಲ್ಲಿ ಆರೋಪಿ ಆಗಿರುವ ದರ್ಶನ್​ ಈಗ ಜೈಲಿನಲ್ಲಿ ಇದ್ದಾರೆ. ಅವರು ಬಿಡುಗಡೆ ಆಗಬೇಕು ಎಂಬುದು ಅಭಿಮಾನಿಗಳ ಬಯಕೆ. ಅದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಈಗ ವೈರಲ್​ ಆಗಿದೆ. ದರ್ಶನ್​ ರಿಲೀಸ್​ ಆಗುತ್ತಾರೋ ಇಲ್ಲವೋ ಎಂಬ ಪ್ರಶ್ನೆಯನ್ನು ಪೂಜಾರಿ ಮೂಲಕ ದೇವರ ಮುಂದೆ ಇಡಲಾಗಿದೆ. ‘ನೋಡಪ್ಪ.. ಈ ವಿಷಯನಾ ಕೇಳಬೇಕೋ ಅಥವಾ ಕೇಳಬಾರದೋ ಗೊತ್ತಿಲ್ಲ. ಆದರೆ ಅಭಿಮಾನಿಗಳ ಪರವಾಗಿ ವರ ಕೇಳ್ತಾ ಇದ್ದೇನೆ. ದರ್ಶನ್ ಅಂತಾ ಒಬ್ಬರು ಕಲಾವಿದರು ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಎಲ್ಲಾ ಸಮಸ್ಯೆ ನಿವಾರಣೆ ಆಗಿ ಅವರು ಮತ್ತೆ ಅಭಿಮಾನಿಗಳನ್ನು ಸೇರುತ್ತಾರೆ ಎಂಬುದಾದರೆ ಆಶೀರ್ವಾದ ಮಾಡು’ ಎಂದು ಪೂಜಾರಿ ವರ ಕೇಳುತ್ತಿದ್ದಂತೆಯೇ ದೇವರ ಮೇಲಿದ್ದ ಹೂವಿನ ಹಾರ ಕೆಳಗೆ ಬಿದ್ದಿದೆ. ದರ್ಶನ್​ ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದೆ.