ಓಂ ಪ್ರಕಾಶ್​ ಕೊಲೆ: ಪತಿಯನ್ನು 8-10 ಬಾರಿ ಇರಿದು ಕೊಂದ ಪತ್ನಿ?

ಕರ್ನಾಟಕದ ಮಾಜಿ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆಯಾಗಿದ್ದಾರೆ. ಬೆಂಗಳೂರಿನ ಹೆಚ್​​ಎಸ್​​ಆರ್ ಲೇಔಟ್​ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನಿವಾಸದಲ್ಲಿ ಓಂ ಪ್ರಕಾಶ್​ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಓಂ ಪ್ರಕಾಶ ಅವರನ್ನು ಅವರ ಪತ್ನಿ ಪಲ್ಲವಿಯವರೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.