JDS ಬಗ್ಗೆ ವ್ಯಂಗ್ಯದ ಮಾತಾಡಿದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (IT BT Minister Priyank Kharge) ಅವರು ವಿಕಾಸಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ನ ಮಾತಡುತ್ತಾ JDS ವಿರುದ್ಧ ವಾಗ್ದಾಳಿ ನಡೆಸಿದರು. ಜಾತ್ಯತೀತ ಜನತಾ ದಳದವರಿಗೆ ಅಸ್ತಿತ್ವ ಇರುತ್ತೋ ಇಲ್ಲವೋ ಗೊತ್ತಿಲ್ಲ. ಬಿಜೆಪಿಯವರಿಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಪ್ಲೇಯಿಂಗ್​ 11ನಲ್ಲೂ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಬಿಜೆಪಿಯವರು ಸಬ್​​ಸ್ಟಿಟ್ಯೂಟ್ ಆಯ್ಕೆ ಮಾಡ್ತಿದ್ದಾರೆ. ಬಿಜೆಪಿಯವರಿಗೂ (BJP) ಅಸ್ತಿತ್ವ ಇಲ್ಲ, ಜೆಡಿಎಸ್​ನವರಿಗೂ (JDS) ಅಸ್ತಿತ್ವ ಇಲ್ಲ. ಒರಿಜಿನಲ್ ಭಾರತೀಯ ಜನತಾ ಪಕ್ಷ ಇಲ್ಲ, ಜೆಡಿಎಸ್ ಸಹ ಇಲ್ಲ. ಹಾಗಾಗಿ ಇವತ್ತೋ, ನಾಳೇನೋ BJP ಪಕ್ಷದಲ್ಲಿ JDS ವಿಲೀನ ಆಗುತ್ತೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಗಿ ಹೇಳಿದರು.