ಗದಗನಲ್ಲಿ ಶಿವಾಜಿ ಮಹಾರಾಜ್ ಜಯಂತ್ಯುತ್ಸವ

ಒಂದು ಅಂದಾಜಿನ ಪ್ರಕಾರ ಶ್ರೀರಾಮಾಸೇನೆಯ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೆರವಣಿಗೆ ಸಂದರ್ಭದಲ್ಲಿ ಮತ್ತು ಜಯಂತ್ಯುತ್ಸದ ಇತರ ಕಾರ್ಯಕ್ರಮಗಳಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತಿರಲು ಅವಳಿ ನಗರದ ಪ್ರಮುಖ ಭಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.