ಸೀರಿಯಲ್ ನಟಿ ಸಿರಿ ಅವರು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ನೀಡಿದ ಟಾಸ್ಕ್ ಮಾಡುವಾಗ ಕೆಲವರು ಅಗ್ರೆಸಿವ್ ಆಗಿ ನಡೆದುಕೊಂಡಿದ್ದಾರೆ. ಆಟ ಗೆಲ್ಲಲೇಬೇಕು ಎಂಬ ಜಿದ್ದಿನಿಂದ ಒಬ್ಬರ ಮೇಲೆ ಮತ್ತೊಬ್ಬರು ಬಿದ್ದಿದ್ದಾರೆ. ಇದರಿಂದ ಕೆಲವು ಸ್ಪರ್ಧಿಗಳಿಗೆ ನೋವಾಗಿದೆ. ಸ್ನೇಹಿತ್, ಮೈಕೆಲ್ ಮುಂತಾದವರು ಬಲ ಪ್ರಯೋಗಿಸಿ ಬೇರೆಯವರನ್ನು ತಳ್ಳಿದ್ದಾರೆ. ‘ಇಷ್ಟೊಂದು ಫಿಸಿಕಲ್ ಬೇಕಾ ಸ್ನೇಹಿತ್’ ಎಂದು ಮನೆ ಮಂದಿ ಪ್ರಶ್ನೆ ಮಾಡಿದ್ದಾರೆ. ‘ಏನಿದು ರಾಕ್ಷಸರ ರೀತಿ..’ ಎಂದು ಮಹಿಳಾ ಸ್ಪರ್ಧಿಗಳು ಟೀಕಿಸಿದ್ದಾರೆ. ಈ ಟಾಸ್ಕ್ನಲ್ಲಿ ಕೆಲವರು ನಡೆದುಕೊಂಡ ರೀತಿಯಿಂದ ಸಿರಿಗೆ ಕಷ್ಟ ಆಗಿದೆ. ಅವರು ನೋವಿನಿಂದ ಕಣ್ಣೀರು ಹಾಕಿದ್ದಾರೆ. ಇದರ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.