ಶಿವರಾಜ್ಕುಮಾರ್ ಅವರು ಸಾಕಷ್ಟು ಖುಷಿಯಲ್ಲಿದ್ದಾರೆ. ಅವರ ಸಂಬಂಧಿಗಳಾದ ಮಧು ಬಂಗಾರಪ್ಪ ಹಾಗೂ ಭೀಮಣ್ಣ ನಾಯ್ಕ್ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಕಂಡಿದ್ದಾರೆ. ಈ ಪೈಕಿ ಬಾಮೈದ ಮಧು ಬಂಗಾರಪ್ಪಗೆ ಸಚಿವ ಸ್ಥಾನ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅವರು ಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ. ಈ ವಿಚಾರ ಶಿವರಾಜ್ಕುಮಾರ್ಗೆ ಖುಷಿ ನೀಡಿದೆ. ಈ ಬಗ್ಗೆ ಮಧು ಬಂಗಾರಪ್ಪ, ಶಿವಣ್ಣ ಹಾಗೂ ಗೀತಕ್ಕ ಒಟ್ಟಾಗಿ ಬಂದು ಟಿವಿ9 ಕನ್ನಡದ ಜೊತೆ ಖುಷಿ ಹಂಚಿಕೊಂಡರು.