ಬೆಂಗಳೂರಿನ ವಿಧಾನಸೌಧಕ್ಕೆ ನೆದರ್ಲ್ಯಾಂಡ್ ಪ್ರಧಾನಮಂತ್ರಿ ಭೇಟಿ ನೀಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಬಿ.ಪಾಟೀಲ್ ಅವರು ನೆದರ್ಲ್ಯಾಂಡ್ ಪ್ರಧಾನಿ ಮಾರ್ಕ್ ರುಟ್ಟೇ ಅವರಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾರ್ಕ್ ರುಟ್ಟೇ ಜೊತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಸಭೆ ನಡೆಸಲಿದ್ದಾರೆ.