ಪ್ರಜ್ವಲ್ ನಾಳೆ ಬೆಂಗಳೂರಿಗೆ ಬರುವುದು ಅನುಮಾನ?

ಸಂಸದ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತ ವಿದೇಶಕ್ಕೆ ಹಾರಿರುವ ಪ್ರಕರಣದ ಎ2 ಆರೋಪಿ ಪ್ರಜ್ವಲ್ ರೇವಣ್ಣ ಮೇ 3ರಂದು ರಾಜ್ಯಕ್ಕೆ ವಾಪಸ್​ ಮರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮೇ 15 ರ ಮಧ್ಯರಾತ್ರಿ ಬೆಂಗಳೂರಿಗೆ ಬರಲು ಮತ್ತೊಂದು ಟಿಕೆಟ್ ಬುಕ್ಕಿಂಗ್​ ಮಾಡಲಾಗಿದೆ. ಆ ಮೂಲಕ ಪ್ರಜ್ವಲ್ ರೇವಣ್ಣ ನಾಳೆ ಬೆಂಗಳೂರಿಗೆ ಬರುವುದು ಅನುಮಾನವೆನ್ನಲಾಗುತ್ತಿದೆ.