ಚೈತ್ರಾ ಕುಂದಾಪುರ ಮೇಲೆ ಕೇಸ್ ಆಗಿದ್ದು ಗೊತ್ತೇ ಇದೆ. ಆ ಪ್ರಕರಣಗಳ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಮಾತನಾಡಿದ್ದಕ್ಕೆ ಚೈತ್ರಾ ಗರಂ ಆಗಿದ್ದಾರೆ. ಇಬ್ಬರ ನಡುವೆ ಭಾರಿ ಜಗಳ ನಡೆದಿದೆ. ಜಗಳ ಮಾಡುವ ಭರದಲ್ಲಿ ಚೈತ್ರಾ ಕುಂದಾಪುರ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಇದಕ್ಕೆ ಜಗದೀಶ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.