‘ಗೋವಾದಲ್ಲಿ ನಾನು ತಪ್ಪು ಮಾಡಿಲ್ಲ, ಅವರು ಹೇಳೋದೆಲ್ಲ ಸುಳ್ಳು’: ಆಂತರ್ಯ ಸತೀಶ್​

ಗೋವಾದಲ್ಲಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಕೆಲವು ನಿರ್ಮಾಪಕ ನಡುವೆ ಜಗಳ ಆಗಿದೆ. ಎ. ಗಣೇಶ್​ ಮೇಲೆ ಆಂತರ್ಯ ಸತೀಶ್​ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಬಗ್ಗೆ ಆಂತರ್ಯ ಸತೀಶ್​ ಮಾತನಾಡಿದ್ದಾರೆ. ‘ನಾನು ಯಾವುದೇ ಕಾರಣಕ್ಕೂ ತಪ್ಪು ಮಾಡಿಲ್ಲ. ಯಾರ ಮೇಲೂ ನಾನು ಹಲ್ಲೆ ಮಾಡಿಲ್ಲ. ಸಿಸಿಟಿವಿ ದೃಶ್ಯಗಳನ್ನು ತೆಗೆಸಲಿ. ಯಾರು ಮೊದಲು ಪ್ರಚೋದನೆ ಮಾಡಿದರು? ಯಾರು ಮೊದಲು ಕೈ ಎತ್ತಿದರು ಎಂಬುದು ತಿಳಿಯುತ್ತದೆ. ನಾನು ಚುಚ್ಚಿಲ್ಲ. ಅದೆಲ್ಲ ಶುದ್ಧ ಸುಳ್ಳು. ಮೋಸ ಇರುವುದೇ ಅವರಲ್ಲಿ. ಎ. ಗಣೇಶ್​ ಮತ್ತು ರಥಾವರ ಮಂಜುನಾಥ್​ ಅವರು ಏಕಾಏಕಿ ಬಂದು ನನ್ನ ಬಳಿ ಕೆಟ್ಟದಾಗಿ ಮಾತನಾಡಿದರು. ನಾನು ಹೊಡೆಯೋಕೆ ಹೋಗಿಲ್ಲ. ನೂಕಾಡಿದ್ದಾನೆ ಅಷ್ಟೇ. ಎನ್​.ಎಂ. ಸುರೇಶ್​ ಅವರು ಬಿಡಿಸೋಕೆ ಬಂದರು. ಇದು ಗಲಾಟೆ, ಹೊಡೆದಾಟ ಅಲ್ಲ’ ಎಂದು ಆಂತರ್ಯ ಸತೀಶ್​ ಹೇಳಿದ್ದಾರೆ.