ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ

ಭಾರತದ ಇನ್ನಿಂಗ್ಸ್​ನ 22ನೇ ಓವರ್​ ಬೌಲ್ ಮಾಡಿದ ಎಜಾಜ್ ಪಟೇಲ್ ಅವರ ಎಸೆತವನ್ನು ರೋಹಿತ್ ಡಿಫೆಂಡ್ ಮಾಡಿಕೊಂಡರು. ಆದರೆ ರೋಹಿತ್ ಶರ್ಮಾ ಅವರ ಬ್ಯಾಟ್‌ಗೆ ತಗುಲಿ ಕೆಳಕ್ಕೆ ಬಿದ್ದ ಚೆಂಡು ಆ ಬಳಿಕ ವಿಕೆಟ್​ನತ್ತ ಹೋಗಲಾರಂಭಿಸಿತು. ಈ ವೇಳೆ ರೋಹಿತ್ ಚೆಂಡನ್ನು ನೋಡುತ್ತಿದ್ದರೂ ಅದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಸ್ವಲ್ಪ ಸಮಯದೊಳಗೆ ಚೆಂಡು ವಿಕೆಟ್‌ಗೆ ಬಡಿದು ರೋಹಿತ್ ಬೌಲ್ಡ್ ಆದರು.