ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದ ಮುಂಭಾಗ ಬಂದಿಳಿದ ಚಂದ್ರಯಾನ ಉಪಗ್ರಹ!

0 seconds of 3 minutes, 28 secondsVolume 0%
Press shift question mark to access a list of keyboard shortcuts
00:00
03:28
03:28
 

ಚಂದ್ರಯಾನ 3 ಯಶಸ್ವಿಯಾಗಲೆಂದು ವಿದ್ಯಾರ್ಥಿಗಳು ಇಂದು ಸೋಮವಾರ ಶ್ರೀಕಂಠೇಶ್ವರನಿಗೆ ( Nanjangud Srikanteshwara) ವಿಶಿಷ್ಟವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳು ದಕ್ಷಿಣಕಾಶಿ ನಂಜನಗೂಡಿನಲ್ಲಿ ದೇಗುಲದ ಮುಂಭಾಗದಲ್ಲಿ ತ್ರಿ ಡಿ ಎಫೆಕ್ಟ್ ಚಿತ್ರ ಬಿಡಿಸಿದ್ದಾರೆ. ನಂಜನಗೂಡಿನ A9 ಆರ್ಟ್ ಸ್ಟುಡಿಯೋ ಚಿತ್ರಕಲಾ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿವಿಧ ಶಾಲೆಗಳ‌ ವಿದ್ಯಾರ್ಥಿಗಳು ಈ ವಿಶಿಷ್ಟ ಪ್ರಾರ್ಥನೆ ಸಲ್ಲಿಸಿದ್ದಾರೆ. ಹತ್ತಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಚಂದ್ರಯಾನದ ಉಪಗ್ರಹ ಶ್ರೀಕಂಠೇಶ್ವರನ ದೇಗುಲದ ಮುಂಭಾಗದಲ್ಲಿ ಬಂದಿಳಿದ ಮಾದರಿಯಲ್ಲಿ ತ್ರಿ ಡಿ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. ಚಂದ್ರಯಾನ-3 ರ (Chandrayaan-3) ವಿಕ್ರಮ್ ಲ್ಯಾಂಡರ್ ಮಾಡ್ಯೂಲ್ (Vikram lander module) ಜುಲೈ 14 ರಂದು ಭೂಮಿಯಿಂದ ಹಾರಿತ್ತು.