ವಿಧಾನಸೌಧದ ಆವರಣದಲ್ಲಿಆನೆಗಳು

ಪ್ರಾಯಶಃ ಇವತ್ತೇ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ಟ್ರಕ್ಕುಗಳಲ್ಲಿ ರವಾನಿಸಬಹುದು. ಎಲ್ಲ ನಾಲ್ಕು ಗಂಡಾನೆಗಳೇ ಅಲ್ಲಿಗೆ ಹೋಗುತ್ತಿರುವುದು ವಿಶೇಷ. ಆನೆಗಳ ಹಿಂಡನ್ನು ಪಳಗಿಸುವ ಕೆಲಸಕ್ಕೆ ಸಲಗಗಳೇ ಬೇಕಾಗುತ್ತವೆ. ಅಂದಹಾಗೆ, ಆನೆಗಳನ್ನು ನೆರೆರಾಜ್ಯಕ್ಕೆ ಕಳಿಸುತ್ತಿರೋದು ತಾತ್ಕಾಲಿಕ ಏರ್ಪಾಟೋ ಅಥವಾ ಶಾಶ್ವತವಾಗಿ ಕಳಿಸಲಾಗುತ್ತಿದೆಯೋ ಅನ್ನೋದು ಇನ್ನೂ ಗೊತ್ತಾಗಿಲ್ಲ.