ಬೆಂಗಳೂರು: ದೂರು ನೀಡಲು ಹೋದ ವಕೀಲರನ್ನೇ ಸೆಲ್ ಒಳಗೆ ಹಾಕಿ ಪೊಲೀಸರಿಂದ ದೌರ್ಜನ್ಯ!
ಬೆಂಗಳೂರು, ಸೆ.9: ಸರ್ಕಾರಿ ಜಮೀನು ಕಬಳಿಕೆ ವಿಚಾರವಾಗಿ ದೂರು ನೀಡಲು ಹೋಗಿದ್ದ ವಕೀಲರನ್ನೇ ಸೆಲ್ ಒಳಗೆ ಹಾಕಿ ದೌರ್ಜನ್ಯ ಎಸಗಿದ ಆರೋಪ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ರಾಜಾನುಕುಂಟೆ ಠಾಣಾ ಪೊಲೀಸರು ವಿರುದ್ಧ ಕೇಳಿಬಂದಿದೆ. ಅಲ್ಲದೆ, ಪೊಲೀಸರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.