ಕಬ್ಬು ಮತ್ತ ಭತ್ತ ಬೆಳೆಯುವ ರೈತರು 5 ಗಂಟೆಗಳ ಕಾಲ 3 ಫೇಸ್ ನಲ್ಲಿ ವಿದ್ಯುತ್ ಪೂರೈಸಬೇಕೆಂಬ ಬೇಡಿಕೆ ಇಟ್ಟಿದ್ದರು, ಅವರಿಗೆ 7 ಗಂಟೆಗಳ ಕಾಲ 3 ಪೇಸ್ ನಲ್ಲಿ ಪವರ್ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಹೇಳಿದರು. ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಅವರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ಅವರ ಹೆಸರೂ ಪಟ್ಟಿಯಲ್ಲಿದೆ ಅಂತ ನಗುತ್ತಾ ಹೇಳಿದರು.