ವರದಿ ಸಲ್ಲಿಸುತ್ತಿರುವ ಸಿಎಂ ಮತ್ತು ಡಿಸಿಎಂ

ಆಂತರಿಕ ತುಮುಲಗಳ ಹೊರತಾಗಿಯೂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮುಗುಳ್ನಗುತ್ತ ರಂದೀಪ್ ಸುರ್ಜೆವಾಲಾ ಪಕ್ಕ ಕೂತಿದ್ದರು. ಮಂತ್ರಿಗಳ ಕಾರ್ಯ ವೈಖರಿಯನ್ನು ವಿಶ್ಲೇಷಿಸಲು ಹೈಕಮಾಂಡ್ ಒಂದು ಚಿಕ್ಕ ಹೊತ್ತಿಗೆಯಲ್ಲಿ ಕ್ವೆಶ್ಚನ್ನೇರ್ ಮಾದರಿಯಲ್ಲಿ ನಾಲ್ಕೈದು ಪ್ರಶ್ನೆಗಳನ್ನು ಕೇಳಿತ್ತು. ಆ ಪ್ರಶ್ನೆಗಳ ಆಧಾರದಲ್ಲಿ ಪ್ರತಿ ಮಂತ್ರಿಯ ಕಾರ್ಯವೈಖರಿಯನ್ನು ಸಿಎಂ ಮತ್ತು ಡಿಸಿಎಂ ವಿಶ್ಲೇಷಿಸಿದ್ದಾರೆ.