Daily Devotional: ಶ್ರಾವಣ ಮಾಸದ ಮಹತ್ವ ಹಾಗೂ ಆಚರಣೆಯ ಫಲ

ಶ್ರಾವಣ ಮಾಸವು ಧಾರ್ಮಿಕವಾಗಿ ಬಹಳ ಮಹತ್ವದ್ದಾಗಿದೆ. ಇದು ಜಪ, ತಪ, ಧ್ಯಾನ ಮತ್ತು ದಾನಕ್ಕೆ ಅತ್ಯಂತ ಶುಭಕರವಾದ ಮಾಸ. ಈ ಮಾಸದಲ್ಲಿ ನಾಗಚತುರ್ಥಿ, ನಾಗಪಂಚಮಿ ಮತ್ತು ವರಮಹಾಲಕ್ಷ್ಮಿ ಹಬ್ಬಗಳನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣನ ಅವತರಣೆಯೂ ಶ್ರಾವಣ ಮಾಸದಲ್ಲೇ ನಡೆದಿದೆ ಎಂಬುದು ಒಂದು ವಿಶೇಷ.