ಅಂಬೇಡ್ಕರ್ ಅವರ ಬಗ್ಗೆ ಮಾತಾಡುವ ರವಿ, ಅವರು ಬದುಕಿದ್ದಾಗ ಮತ್ತು ಸತ್ತಾಗಲೂ ಕಾಂಗ್ರೆಸ್ ಅವರನ್ನು ಅಪಮಾನಿಸಿತು, 1952 ಲೋಕಸಭಾ ಚುನಾವಣೆಯಲ್ಲಿ ಸೋಲುವಂತೆ ಮಾಡಿತು, ಅವರ ಶವಸಂಸ್ಕಾರಕ್ಕಾಗಿ ದೆಹಲಿಯಲ್ಲಿ ಜಾಗ ಕೊಡಲಿಲ್ಲ, ಶವಸಾಗಣೆಯ ವಿಮಾನ ಬಾಡಿಗೆಯನ್ನೂ ಕುಟುಂಬದಿಂದ ವಸೂಲು ಮಾಡಲಾಯಿತು, ಮತ್ತು ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರ 1990 ರಲ್ಲಿ ನೀಡಿತು ಎಂದು ಹೇಳಿದರು.