ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಸೋಮಶೇಖರ್, ರಾಜಣ್ಣ ಮತ್ತು ದಿನೇಶ್ ಒಟ್ಟಿಗೆ ಬರುತ್ತಾರಾದರೂ ಏರ್ಪೋರ್ಟ್ನಿಂದ ಬೇರೆ ಬೇರೆ ದಿಕ್ಕಿನೆಡೆ ಹೋಗುತ್ತಾರೆ. ಕನ್ನಡಿಗರಿಗೆ ಗೊತ್ತಿರುವಂತೆ ಸೋಮಶೇಖರ್ ಕಾಂಗ್ರೆಸ್ ಸೇರುವ ವದಂತಿಗಳು ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಹರಿದಾಡುತ್ತಿವೆ. ಅವರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಅವರ ಮೇಲೆ ಇದುವರೆಗೆ ಕ್ರಮ ಜರುಗಿಲ್ಲ.