ದೇವರ ಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ತಂದೆ, ಮಗ ಸಾವು

ದಾವಣಗೆರೆ: ಹರಿಹರ ತಾಲ್ಲೂಕಿನ ದೇವರ ಬೆಳಕೆರೆ ಪಿಕಪ್‌ ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ಹರಿವು ಜಾಸ್ತಿಯಾಗಿ ತಂದೆ–ಮಗ ಗುರುವಾರ ಮೃತಪಟ್ಟಿದ್ದಾರೆ. ಹರಿಹರ ತಾಲ್ಲೂಕಿನ ಮಿಟ್ಲಕಟ್ಟೆಯ ಚಂದ್ರಪ್ಪ (42) ಹಾಗೂ ಪುತ್ರ ಶೌರ್ಯ(10) ಮೃತಪಟ್ಟವರು.